Sunday, 15 June 2008
ಮುಂದುವರೆದ ಭಾಗ
ಡಿಗ್ರೀಸ್ -ನಿಮಿಷ
೧೯-೩೦ = ಪೂರ್ಣಚಂದ್ರಾಂಶ = ಸಂತೋಷ
೨೦-೦೦ = ವಿಷಪ್ರದಿಗ್ಯಾಂಶ = ಕ್ಷಯ
೨೦-೩೦ = ಕುಲನಾಶಾಂಶ = ಹಾನಿ
೨೧-೦೦ = ಮುಖ್ಯಾಂಶ = ಸಿದ್ಧಿ
೨೧-೩೦ = ವಂಶಕ್ಷಯಾಂಶ = ಕುಲಕ್ಷಯ
೨೨-೦೦ = ಉತ್ಪಾತಕಾಂಶ = ಮಾಹಾ ಕಷ್ಟ
೨೨-೩೦ = ಕಾಲರೂಪಾಂಶ = ಮೃತ್ಯುಭಯ
೨೩-೦೦ = ಸೌಮ್ಯಾಂಶ = ಸಿದ್ಧಿ
೨೩-೩೦ = ಮೃದ್ವಂಶ = ಸೌಭಾಗ್ಯ
೨೪-೦೦ = ಸುಶೀತಲಾಂಶ = ಕಲ್ಯಾಣ
೨೪-೩೦ = ದಂಷ್ಟ್ರಾಂಶ = ಭಯ
೨೫-೦೦ = ಇಂದುಮುಖಾಂಶ = ಚಿಂತಾನಾಶ
೨೫-೩೦ = ಕಾಲಾಗ್ನಿ ಅಂಶ = ಕಲಹ
೨೬-೦೦ = ದಂಡಾಯುಧಾಂಶ = ಕ್ಲೇಶ
೨೬-೩೦ = ನಿರ್ಮಲಾಂಶ = ಸೌಭಾಗ್ಯ
೨೭-೦೦ = ಶುಭಾಂಶ = ಶುಭ
೨೭-೩೦ = ಅಶುಭಾಂಶ = ಅಸುಖ
೨೮-೦೦ = ಶೀತಲಕರಾಂಶ = ಕಾರ್ಯಸಿದ್ಧಿ
೨೮-೩೦ = ಸುಧಾರಸಾಂಶ = ಆಯುಷ್ಯ ವೃದ್ಧಿ
೨೯-೦೦ = ಪಯೋಧಿ ಅಂಶ = ಸಿದ್ಧಿ
೨೯-೩೦ = ಭ್ರಮಣಾಂಶ = ಅರ್ಥಹಾನಿ
೩೦-೦೦ = ಇಂದುರೇಖಾಂಶ = ಸಾಧಾರಣ
ಗ್ರಹಗಳು ಪುರುಷ ರಾಶಿಯಲ್ಲಿದ್ದರೆ ಒಂದರಿಂದ ೬೦
ರ ವರೆಗೆ ನೋಡಬೇಕು
ಗ್ರಹಗಳು ಸ್ತ್ರೀ ರಾಶಿಯಲ್ಲಿದ್ದರೆ ೬೦ ನೇ ಅಂಶ
ಮೊದಲನೆಯದಾಗುತ್ತದೆ, ಅಂದರೆ ೬೦ ನೇಯ ಅಂಶದಿಂದ ನೋಡಬೇಕು
ಇಲ್ಲಿ ಬರೆದಿರುವ ಫಲಗಳಿಗೆ ಶಷ್ಟಾಂಶ ಫಲಗಳು
ಎಂದು ಅರ್ಥ
Thursday, 12 June 2008
ಮುಂದುವರೆದ ಭಾಗ..
ಡಿಗ್ರೀಸ್ - ನಿಮಿಷ
೧೮-೦೦ = ಕಂಟಕಾಂಶ = ವಂಶಹಾನಿ
೧೮-೩೦ = ಅಮೃತಾಂಶ = ಕಲ್ಯಾಣ
೧೯-೦೦ = ಮೃತಾಂಶ = ಅಪಮೃತ್ಯು
Tuesday, 13 May 2008
ಮುಂದುವರೆದ ಭಾಗ:
ಡಿಗ್ರೀ-ನಿಮಿಷ
೧೪-೦೦ = ಕ್ಶಿತೀಶ್ವರಾಂಶ = ರಾಜಸನ್ಮಾನ
೧೪-೩೦ = ಕಮಲಾಕರಾಂಶ = ಧನಪ್ರಾಪ್ತಿ
೧೫-೦೦ = ಮಂದಾತ್ಮಜಾಂಶ = ಧನನಾಶ
೧೫-೩೦ = ಮೃತ್ಯುಅಂಶ = ರೋಗಪೀಡೆ
೧೬-೦೦ = ಕಾಲಾಂಶ = ಕ್ಷಯ
೧೬-೩೦ = ದಾವಾಗ್ನಿ ಅಂಶ = ದುಃಖ
೧೭-೦೦ = ಅಗ್ನಿಚೋರಾಂಶ = ಲಕ್ಷ್ಮಿಕ್ಷಯ
೧೭-೩೦ = ಯಮಕಂಟಕಾಂಶ = ಪ್ರಾಣಣಣನಾಶ
Wednesday, 7 May 2008
ಈಗ ಎಲ್ಲರ ಕಣ್ಣುಗಳು ಯಾವ ಕೋನದಲ್ಲಿ
ನೋಡುತ್ತವೋ ಅದಕ್ಕೆ ಗ್ರಹಗಳ ಕೋನಗಳು ಎಂದು ಹೇಳುತ್ತೇವೆ.
ಶಷ್ಠಿ ಅಂಶ ದಲ್ಲಿ ಬರುವ ಡಿಗ್ರೀಸ್ ಮತ್ತು
ನಿಮಿಷಗಳ ಫಲಗಳು ಈ ರೀತಿ ಇವೆ.
ಪುರುಷ ರಾಶಿಗಳಲ್ಲಿ ಫಲ ನೋಡುವ ರೀತಿಯನ್ನು
ಇಲ್ಲಿ ಬರೆಯುತ್ತೇನೆ. ೧ ರಿಂದ ೬೦ ನಂ ವರೆಗೆ ನೋಡುವ ರೀತಿ.
ಡಿಗ್ರೀಸ್-ನಿಮಿಷಗಳು
೦೦-೦೦
೦೦-೩೦ = ಘೋರಾಂಶ = ಕೆಟ್ಟದ್ದು
೦೧-೦೦ = ರಾಕ್ಷಸಾಂಶ = ಕೆಟ್ಟದ್ದು
೦೧-೩೦ = ದೇವಾಂಶ = ಉತ್ತಮ
೦೨-೦೦ = ಕುಬೇರಾಂಶ = ಹಣ ಉಳ್ಳವನು
೦೨-೩೦ = ರಕ್ಷೋಗಣಾಂಶ = ಒಳ್ಳೆಯದು-ಸಿದ್ಧಿ
೦೩-೦೦ = ಕಿನ್ನರಾಂಶ = ಸ್ನೇಹ
೦೩-೩೦ = ಹೃಷ್ಟಾಂಶ = ದೇಶಾಂತರ ವಾಸ
೦೪-೦೦ = ಕುಲಘ್ನಾಂಶ = ವಂಶನಾಶ
೦೪-೩೦ = ಗರಳಾಂಶ = ಅಶುಭ
೦೫-೦೦ = ಅಗ್ನಿಸಂಘಾಂಶ = ಅಗ್ನಿ ಭಯ
೦೫-೩೦ = ಮಾಯಾಂಶ = ದುಃಖ
೦೬-೦೦ = ಪ್ರೇತಾಂಶ = ಭೂತಭಯ
೦೬-೩೦ = ಪುರೀಷಾಂಶ = ಕ್ಷಯ
೦೭-೦೦ = ವರುಣಾಂಶ = ಶುಭ
೦೭-೩೦ = ಇಂದ್ರಾಂಶ = ಶುಭ
೦೮-೦೦ = ಸರ್ಪಾಂಶ = ಕ್ಷಯ
೦೮-೩೦ = ಅಹಿಭಾಗಾಂಶ = ಅಶುಭ
೦೯-೦೦ = ಚಂದ್ರಾಂಶ = ಸುಖಕರ
೦೯-೩೦ = ಮೃದ್ವಂಶಕಾಂಶ = ಲಾಭ
೧೦-೦೦ = ಕೋಮಲಾಂಶ = ಸೌಖ್ಯ
೧೦-೩೦ = ಪದ್ಮಭಾಗಾಂಶ = ಬಹುಸುಖ
೧೧-೦೦ = ಲಕ್ಷೀಶಾಂಶ = ಮಂಕುಮಂಕಾಗಿ ಇರುವವನು,ಕೋಪಿಷ್ಠ,ಟೆನ್ಶನ್, ಮೂಡ್ ಆಫ್, ಡಿಪ್ರೆಷನ್, ಅನುಮಾನ ಪಡುವವನು
ಇತ್ಯಾದಿ
೧೧-೩೦ = ವಾಗೀಶಾಂಶ = ವಾದ ವಿವಾದ ಮಾಡುವವನು, ದುರಃಹಂಕಾರಿ,
೧೨-೦೦ = ದಿಗಂಬರಾಂಶ = ಅಸುಖ
೧೨-೩೦ = ದೇವೇದ್ರಾಂಶ = ರಾಜಸನ್ಮಾನ
೧೩-೦೦ = ಭಾಗಾಂಶ = ಧನನಷ್ಟ, ಅವಮಾನ, ಕಾರಣ ಇಲ್ಲದೆ ಅವಮಾನ
ಆಗುವುದು, ಸಾಲ ಮಾಡಿ ಭೋಗ ಮಾಡುವವನು, ತನ್ನಲ್ಲಿರುವ ಹಣವನ್ನು ಪೋಲು ಮಾಡುವವನು, ಬೇರೆಯವರು ಯಾರಾದರೂ ಸಾಲ ಕೇಳಿದರೆ ಬೇರೆ ಕಡೆಯಿಂದ ಬಡ್ಡಿಗೆ ಸಾಲ ತಂದು ಬೇರೆಯವರಿಗೆ ಸಾಲ ಕೊಡಿಸುವವನು, ಇದರಿಂದ ಹಣ ತಂದ ಸ್ಥಳದಿಂದ
ಅವಮಾನ. ಯಾರೋ ಮಾಡಿದ ತಪ್ಪನ್ನು ವಿನಾಕಾರಣ ಇವನ ತಲೆಯಮೇಲೆ ಹೊರೆಸಿ ಅವಮಾನ ಮಾಡುವುದು ಇತ್ಯಾದಿ
೧೩-೩೦ = ನಾಶಾಂಶ = ಎಲ್ಲದರಿಂದಲೂ ನಾಶ
ಹೊಂದುವವನು
..........................................................ಮುಂದುವರೆಯುವುದು
Tuesday, 6 May 2008
ಈ ಕೆಳಗಿನ ಜಾತಕದವನು ಹುಟ್ಟಿದಾಗ ಗ್ರಹಗಳು ಕೆಲವು ಮನೆಗಳಲ್ಲಿ ಕೂತಿವೆ.
ಅಂದರೆ ಮೀನ ರಾಶಿಯಲ್ಲಿ ಶುಕ್ರ = ೨೯
ಡಿಗ್ರೀ-೪೭ನಿಮಿಷ
ಚಂದ್ರ = ೦೪ಡಿಗ್ರೀ-೪೯ನಿಮಿಷ
ಗುರು = ೦೭ಡಿಗ್ರೀ-೩೪ನಿಮಿಷ
ಮೇಷ ರಾಶಿಯಲ್ಲಿ ಶನಿ = ೦೨ಡಿಗ್ರೀ-೦೨ನಿಮಿಷ
ಬುಧ = ೦೭ಡಿಗ್ರೀ-೦೨ನಿಮಿಷ
ರವಿ = ೨೯ಡಿಗ್ರೀ-೫೨ನಿಮಿಷ
ಕೇತು = ೧೩ಡಿಗ್ರೀ-೦೦ನಿಮಿಷ
ತುಲಾ ರಾಶಿಯಲ್ಲಿ ರಾಹು = ೧೩ಡಿಗ್ರೀ-೦೦ನಿಮಿಷ
ಮಕರ ರಾಶಿಯಲ್ಲಿ ಕುಜ = ೦೩ಡಿಗ್ರೀ-೨೬ನಿಮಿಷ
ವೃಶ್ಚಿಕ ರಾಶಿಯಲ್ಲಿ ಲಗ್ನ =
೧೯ಡಿಗ್ರೀ-೧೫ನಿಮಿಷ
ಇದಿಷ್ಟೂ ಈ ಜಾತಕದಲ್ಲಿವೆ. ಇದು ಹುಟ್ಟಿದಾಗ
ಇರತಕ್ಕ ಗ್ರಹಗಳ ಅಂಶ
ಮನುಷ್ಯ ಪ್ರತಿದಿನವೂ ಬೆಳೆಯುತ್ತಿರುತ್ತಾನೆ. ಅದಕ್ಕೆ ತಕ್ಕಂತೆ ಗ್ರಹಗಳೂ ಬೆಳೆಯುತ್ತಿರುತ್ತವೆ. ಅಂದರೆ ಮುಂದಕ್ಕೆ ಹೋಗುತ್ತಿರುತ್ತವೆ. ಮನುಷ್ಯ ಹುಟ್ಟಿದ ಸಮಯದಲ್ಲಿ ಗ್ರಹಗಳ ಗತಿ ಎಂದು ಇರುತ್ತದೆ. ಆ ಗತಿಗಳನ್ನು ಸರಿಯಾಗಿ
ನಮೂದಿಸಿರಬೇಕು. ಯಾಕಂದರೆ ಈ ಗ್ರಹಗಳ ಗತಿಗಳಿಂದಲೇ ಮನುಷ್ಯನ ಏಳು ಬೀಳುಗಳು
ನಡೆಯುತ್ತಿರುತ್ತವೆ. ಅಂದರೆ ಒಂದು ವರ್ಷಕ್ಕೆ ೪ ನಿಮಿಷದಂತೆ, ಒಂದು ತಿಂಗಳಿಗೆ ೪ ನಿಮಿಷದಂತೆ, ಒಂದು ದಿನಕ್ಕೆ ೪ ನಿಮಿಷದಂತೆ ಗ್ರಹಗಳು ಮುಂದುಮುಂದಕ್ಕೆ
ಹೋಗುತ್ತಿರುತ್ತವೆ. ಇದು ಕಣ್ಣಿಗೆ ಕಾಣುವಂಥದಲ್ಲ. ಒಂದು
ಸಣ್ಣ ಸಿನೆಮಾ ಫಿಲ್ಮ್ ನ್ನು ಹೇಗೆ ಬೇರೆ, ಬೇರೆ ಆಕಾರಕ್ಕೆ ಏರಿಸುತ್ತಾರೋ, ಅಂದರೆ 8mm, 16mm,
35mm, 70mm ಗೆ ತೆಗೆಯುತ್ತಾರೋ
ಅದೇ ರೀತಿ ನಾವು ಜಾತಕಗಳನ್ನು ದೊಡ್ಡದಾಗಿ ಮಾಡಿದರೆ ಈ ಕ್ಷಣದಲ್ಲಿ ಏನೇನು
ನಡೆಯುತ್ತಿದೆ ಎಂದು ತಿಳಿಯಬಹುದು. ಇದನ್ನೆಲ್ಲಾ ಲೆಕ್ಕಿಸಬೇಕಾದರೆ ತುಂಬಾ ತಾಳ್ಮೆ ಬೇಕು
ಮತ್ತು ಲೆಕ್ಕ ಮಾಡುವುದು ಗೊತ್ತಿರಬೇಕು. ಇದೊಂದೇ ಅಲ್ಲಾ ಆ ಗ್ರಹಗಳು
ಒಂದನ್ನೊಂದನ್ನು ವೀಕ್ಷಿಸಿಕೊಂದು ಮುಂದು ಮುಂದಕ್ಕೆ
ಹೋಗುತ್ತಿರುತ್ತವೆ. ಅದರಿಂದಲೇ ನಮ್ಮ ಜೀವನದಲ್ಲಿ ತುಂಬಾ ಬದಲಾವಣೆಗಳು ಬರುವುದು. ಎಲ್ಲೆಲ್ಲೋ ಇರ್ತೀವಿ, ಎಲ್ಲೆಲ್ಲೋ ಹೋಗ್ತೀವಿ, ಇನ್ನೆಲ್ಲೋ ವಾಸ ಮಾಡ್ತೀವಿ, ಯಾವುದೋ ಊರಿನಲ್ಲಿ ಮದುವೆ ಆಗ್ತೀವಿ, ಹೀಗೇ ಬದಲಾವಣೆಗಳು ಬರುತ್ತಿರುತ್ತವೆ.
..................................ಮುಂದುವರೆಯುವುದು
Sunday, 4 May 2008
ಎಲ್ಲರೂ ತಿಳಿದಿರುವ ಹಾಗೆ ಜಾತಕ ಅಂದರೆ ೧೨
ರಾಶಿ ಇರುತ್ತೆ. ಯಾವ ಯಾವುದೋ ಮನೆಯಲ್ಲಿ ಯಾವ ಯಾವುದೋ
ಗ್ರಹಗಳು ಕೂತಿರುತ್ತವೆ. ಅಲ್ಲಿ ಕುಜ ಕೂತ, ಇಲ್ಲಿ ಶುಕ್ರ ಕೂತ, ಇನ್ನೊಂದು ಕಡೆ ರಾಹು ಕೂತ ಅಂತ
೯ ಗ್ರಹಗಳ ಮೇಲೆ ಫಲ ಹೇಳುತ್ತಾ ಹೋಗುತ್ತಾರೆ. ಪ್ರತಿ ಒಂದು ನಿಮಿಷಕ್ಕೆ ೩೦೦ ಜನ ಮಕ್ಕಳು ಹುಟ್ಟುತ್ತಾರೆ. ಎಲ್ಲರದೂ ಒಂದೇ ಫಲ ಬರುತ್ತದೆಯೇ? ಕುಜ ರಾಹುನ ನೋಡ್ತಿದಾನೆ
ಅಂತ ಕೆಲವು ಜ್ಯೋತಿಷಿಗಳು ಹೇಳುತ್ತಾರೆ. ಅವನು ಯಾವ ಕೋನದಲ್ಲಿ ನೋಡ್ತಿದಾನೆ ಅಂತ ಹೇಳ್ತಾರ. ನೀವುಗಳು ಒಬ್ಬ ಜ್ಯೋತಿಷಿ ಹತ್ತಿರ ಹೋದರೆ ಅವರು ಹೇಳಿದ್ದನ್ನ ಕೇಳಿಕೊಂಡು ಬರುತ್ತೀರಿ. ಕೆಲವು ಮಹಾನ್ ಜ್ಯೋತಿಷಿಗಳು
ಇದ್ದಾರೆ. ಅವರುಗಳು ಸರಿಯಾಗಿ ಹೇಳುತ್ತಾರೆ. ಅವರಿಗೆ ವಿಶೇಷ ದೈವ ಶಕ್ತಿ ಇರುತ್ತದೆ.
ಆದ್ದರಿಂದ ಅವರು ಕರೆಕ್ತ್ ಆಗಿ ಹೇಳುತ್ತಾರೆ. ಇನ್ನು ಕೆಲವರು ಡಿಗ್ರೀಸ್ ಮತ್ತು
ನಿಮಿಷಗಳಲ್ಲಿ ಲೆಕ್ಕ ಹಾಕುತ್ತಾರೆ.
ಅದರಲ್ಲೂ ವೈವಿಧ್ಯತೆಗಳು ಇವೆ. ಯಾವಾಗಲೂ ಒಬ್ಬ
ವ್ಯಕ್ತಿಯನ್ನು ಅಳೆಯಬೇಕಿದ್ದರೆ ಅವನ ಒಳ ಅಂತರಂಗವನ್ನು ನೋಡಬೇಕು.
ಹೇಗೆಂದರೆ ನಾವು ಒಂದು ಮರವನ್ನು ಬೆಳೆಯಬೇಕಾದರೆ ಮೊದಲಿಗೆ ಒಂದು ಬೀಜವನ್ನು ಬಿತ್ತುತ್ತೇವೆ. ಅದಕ್ಕೆ ನೀರು ಮತ್ತು ಗೊಬ್ಬರ ಹಾಕಿಕೊಂಡೇ ಬರುತ್ತೇವೆ. ಅದು
ಬೇರುಗಳನ್ನು ಬಿಡುವಾಗ ನಮಗೆ ಗೊತ್ತಿರುತ್ತದೆಯೇ ಆ ಬೇರುಗಳಲ್ಲಿ ಏನೇನು
ಸತ್ವ ಇದೆ ಅಂತ. ಅದು ಗೊತ್ತಾಗೊಲ್ಲ. ಅದು ಹಾಗೇ ದೊಡ್ಡ
ದೊಡ್ಡ ಬೇರುಗಳಾಗಿ ಬೆಳೆದು ಮರವಾಗಿ ಬೆಳೆದಮೇಲೆ ಕೊಂಬೆಗಳನ್ನು ಹೊಂದಿದಮೇಲೆ ತಾನೆ ಗೊತ್ತಾಗುವುದು ಆ ಬೇರಿನಲ್ಲಿ ಏನೇನು ಸತ್ವ ಇತ್ತು ಎನ್ನುವುದು. ಕೊಂಬೆ ಬರುವವರೆಗೂ ನಮಗೇನೂ ಗೊತ್ತಾಗುವುದೇ ಇಲ್ಲಾ. ಹಾಗೆಯೇ ನಮ್ಮ
ಜೀವನವೂ ಸಹ. ನಾವುಗಳು ಹುಟ್ಟಿದಾಗ ಗ್ರಹಗಳು ಯಾವ, ಯಾವುದೋ ಮನೆಯಲ್ಲಿ ಕೂತುಕೊಳ್ಳುತ್ತವೆ. ಅದರ ಫಲಗಳನ್ನು ಯಾವಾಗಲೂ ಡಿಗ್ರೀಸ್ ಮತ್ತು ನಿಮಿಷಗಳಲ್ಲೇ ಅಳೆಯಬೇಕು.
ನಿಮಗೆ ಗೊತ್ತೇ? ಎಲ್ಲಾ ಗ್ರಹಗಳಿಗೂ ಪ್ರತಿಯೊಂದು ಡಿಗ್ರೀ ಮತ್ತು ನಿಮಿಷಗಳಿಗೆ ಫಲ ಇದೆ
ಎನ್ನುವುದು. ಒಂದು ಗ್ರಹ ಇನ್ನೊಂದು ಗ್ರಹವನ್ನು ನೋಡುತ್ತಿದೆ ಅಂದರೆ ಯಾವ
ಕೋನದಲ್ಲಿ ನೋಡುತ್ತಿದೆ ಎಂಬುದನ್ನು ನೋಡಬೇಕು. ಅದು ಯಾವ ಕೋನದಲ್ಲಿ
ನೋದುತ್ತಿರುತ್ತದೆಯೋ, ಅದರಂತೆ ನಾವು ಇನ್ನೊಬ್ಬರನ್ನು
ನೋಡುತ್ತೇವೆ. ನಮ್ಮ ಒಳಗಿನ ಅಂತರಂಗದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ನಮ್ಮ ಕಣ್ಣುಗಳ ಮೂಲಕ ಮಾತ್ರ ತಾನೇ ಗೋತ್ತಾಗುವುದು. ಅದನ್ನು ಹೇಗೆ ಲೆಕ್ಕಾಚಾರ ಹಾಕುವುದು ಎನ್ನುವುದನ್ನು ಕಲಿಯಬೇಕು.
ಒಂದು ಮದುವೆ ಮಾಡಬೇಕಿದ್ದರೆ ಹುಡುಗಿಯ ನಕ್ಷತ್ರ ಮತ್ತು ಹುಡುಗನ ನಕ್ಷತ್ರ ಹೊಂದಾಣಿಕೆ ಮಾಡಿದರೆ ಸಾಲದು. ೩೬
ಗುಣ ಬಂತು ಅಂತ ಮದುವೆ ಮಾಡಿದರೆ ಸಾಕೇ??????????? ೪ ಗುಣ ಬಂತು ಅಂತ ಬಿಡುವುದೇ????? ಇದರಲ್ಲಿ ೪ ಗುಣ, ೩೬ ಗುಣ ಮುಖ್ಯ ಅಲ್ಲ. ಹಿಂದಿನ ಜನ್ಮದ ಋಣಾನುಸಂಬಂಧ ಮುಖ್ಯ. ಅದು
ಇದ್ದರೆ ೪ ಗುಣ ಬಂದರು ಮದುವೆ ಆಗೇ ಆಗುತ್ತದೆ. ಋಣಾನುಸಂಬಂಧ ಇದ್ದರೆ ಯಾವ ಬ್ರಹ್ಮ
ನಿಂದಲೂ ಮದುವೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಹುಡುಗ ಆಗಲೀ, ಹುಡುಗಿ ಆಗಲೀ ಒಬ್ಬರ ಕೈಲಿ ಒಬ್ಬರು ಅನುಭವಿಸಲೇ ಬೇಕು ಅನ್ನೋ ಹಿಂದಿನ ಜನ್ಮದ ಋಣಾನುಸಂಬಂಧ ಇದ್ದರೆ ಯಾರ ಕೈಲೂ ಮದುವೆ ನಿಲ್ಲಿಸಲು ಸಾಧ್ಯವಿಲ್ಲ.
ಒಂದು ಪಕ್ಷ ನಮ್ಮಲ್ಲಿಗೆ ಜಾತಕಗಳು ಬಂದಲ್ಲಿ
ಇಬ್ಬರದೂ ಅಂತರಂಗವನ್ನು ಪರೀಕ್ಷಿಸಬೇಕು. ಅದಕ್ಕೆ ಬೇರೆ ಸಾಫ್ಟ್ ವೇರ್
ಮಾಡಿಕೊಳ್ಳಬೇಕು. ಎಲ್ಲ ಜ್ಯೋತಿಷಿಗಳೂ ದಶ ಮತ್ತು ಭುಕ್ತಿಗಳ ಮೇಲೆ
ನೋಡುತ್ತಾರೆ. ಆದರೆ ಇದರಲ್ಲಿ ಇನ್ನೊಂದು ತರಹ ಲೆಕ್ಕ ಇದೆ. ಅದನ್ನು
ಮಾಡಿದರೆ ಕರೆಕ್ಟ್ ಆಗಿ ಬರುತ್ತದೆ.
ಇದರಲ್ಲಿ ಶಷ್ಟಾಂಶ, ಚಂದ್ರ ವೇಲಾ ಫಲ, ಚಂದ್ರ ಕ್ರಿಯೆ, ಚಂದ್ರ ಅವಸ್ಥೆ ಎಂದು ಫಲಗಳು ಇರುತ್ತವೆ. ಇದಲ್ಲದೆ ನಾಡೀ ಅಂಶಗಳ ಪ್ರಕಾರನೂ ಫಲಗಳನ್ನು ನೋಡಬೇಕು ಇವೆಲ್ಲವನ್ನೂ ಡಿಗ್ರೀ
ಮತ್ತು ನಿಮಿಷಗಳಲ್ಲೇ ನೋಡಬೇಕು.
..............................ಮುಂದುವರೆಯುತ್ತದೆ
Monday, 17 May 2010
11-00 ಡಿಗ್ರೀಗಳಿಂದ 11-30 ಡಿಗ್ರೀಗಳ ಒಳಗೆ ಇರುವ ಮದುವೆ ಆಗುವ ಹುಡುಗ ಅಥವಾ ಹುಡುಗಿಯರ ದಾಂಪತ್ಯ
ಜೀವನ ಮತ್ತು
ಈಗಾಗಲೇ ದಾಂಪತ್ಯ ಜೀವನವನ್ನು
ನಡೆಸುತ್ತಿರುವವರಿಗೂ ಇದು ಅನ್ವಯವಾಗುತ್ತೆ.
ಮದುವೆ ಆಗುವ ಹುಡುಗ ಅಥವಾ ಹುಡುಗಿಯರ ದಾಂಪತ್ಯ ಜೀವನ ಈ ಮುಂಚೆ ಹುಡುಗ ಅಥವಾ ಹುಡುಗಿಗೆ ಮದುವೆ ಆಗಬೇಕಾದಲ್ಲಿ ಏನೇನು ಅಂಶಗಳು ಇರಲೇಬೇಕು ಎಂಬುದನ್ನು ಹಿಂದೆಯೇ ವಿವರಿಸಿದ್ದೆ. ಈಗ ಯಾವ, ಯಾವ ಡಿಗ್ರೀಗಳು ಇದ್ದರೆ ದಾಂಪತ್ಯ ಜೀವನದಲ್ಲಿ ಕೋಲಾಹಲ ಇರುತ್ತೆ ಎಂಬುದನ್ನು ವಿವರಿಸುತ್ತೇನೆ.
ಇದು ಯಾರದೇ ಜಾತಕದ ಮುಖ್ಯ ಕುಂಡಲಿಯಲ್ಲಿ ಪುರುಷ
ರಾಶಿಯಲ್ಲಿ ಇದ್ದರೆ
ಈ ಕೆಳಗಿನ ಯಾವುದಾದರೂ ಒಂದು ಅಥವಾ ಎರಡು
ಗುಣಗಳು ಇರಬಹುದು. ಎಲ್ಲಾ ಗುಣಗಳೂ ಇದ್ದರೂ ಆಶ್ಚರ್ಯವೇನಿಲ್ಲ.
ವಿಪರೀತ, ಭಯಂಕರ ಕೋಪ, ಎಲ್ಲದಕ್ಕೂ ಅನುಮಾನ ಪಡುವುದು, ಸಣ್ಣ ಸಣ್ಣ ವಿಷಯಕ್ಕೂ ಜಗಳ, ಸಣ್ಣ ಸಣ್ಣ ವಿಷಯವನ್ನು ಬಂಡೆಯಂತೆ ಮಾಡುವುದು, ನಾವು ಹೇಳೋದೆ ಒಂದು, ಅವರು ಅರ್ಥ ಮಾಡಿಕೊಳ್ಳೋದೆ ಒಂದು, ಇದರಿಂದ ಅನರ್ಥಗಳು, ಯಾವಾಗಲೂ ಮಂಕಾಗಿರುವುದು, ಇವರ ಮುಖದಲ್ಲಿ ನಗು ಬರುವುದೇ ಅಪರೂಪ, ಎಲ್ಲದಕ್ಕೂ ಕೆಲಸಕ್ಕೆ ಬಾರದ ವಾಗ್ವಾದ, ಅವರು ಹೇಳಿದಂತೆಯೇ ಬೇರೆಯವರು
ನಡೆದುಕೊಳ್ಳಬೇಕೆಂಬ ಹಠ, ಅತೀ ನಿದ್ದೆ, ಇಲ್ಲವಾದರೆ ನಿದ್ರೆಯೇ ಮಾಡುವುದಿಲ್ಲ, ಊಟದಲ್ಲಿ ಆಸಕ್ತಿ ಇರುವುದಿಲ್ಲ, ಯಾವಾಗಲೂ ಜಂಕ್ ಆಹಾರದ ಮೇಲೆಯೇ ಆಸಕ್ತಿ, ಅನಾರೋಗ್ಯ, ಡಾಕ್ಟರರ ಹತ್ತಿರ ಹೋದಾಗ ತಪ್ಪು ಡಯಾಗ್ನೋಸಿಸ್ ಆಗುತ್ತೆ, ತಪ್ಪು ಔಷಧಿಗಳನ್ನು ತಿಂದು ಒದ್ದಾಡುವುದು, ಅದರಿಂದ ದೇಹದಲ್ಲಿ ಅತೀ ಟಾಕ್ಸಿನ್ ಗಳು ಸೇರಿ ಅದರಿಂದ ಅನಾಹುತ, ನೂರಾರು ಡಾಕ್ಟರುಗಳ ಹತ್ತಿರ ಓಡಾಡುವುದು, ಕೇಳಿದ ಪ್ರಶ್ನೆಯನ್ನೇ ನೂರಾರು ಜನಗಳನ್ನು ಕೇಳುವುದು, ಇವರಿಗೆ ಯಾವುದರಲ್ಲೂ ನಂಬಿಕೆ
ಇಲ್ಲದಿರುವುದು, ಇವರಿಗೆ ಸ್ನೇಹಿತರು ಬೇಡ, ಇದ್ದರೂ ಸಹಾ ಕೇವಲ
ಬೆರಳೆಣಿಕೆಯಷ್ಟು ಇರುತ್ತಾರೆ. ಗಂಡಸರಿಗೆ ಇದು ಜಾಸ್ತಿ ಇದ್ದರೆ ಹೆಂಡತಿಯ ಮೇಲೆ ಕೆಲಸಕ್ಕೆ ಬಾರದಕ್ಕೆಲ್ಲಾ ಅನುಮಾನ, ಯಾವ, ಯಾವುದಕ್ಕೋ ಸುಮ್ಮ ಸುಮ್ಮನೆ ಜಗಳ ಆಡುವುದು, ಇನ್ನೂ ಮುಂದಕ್ಕೆ ಹೋದರೆ ಹೊಡೆದಾಟ, ಬಡಿದಾಟ, ಒಂದು ಪಕ್ಷ ಇಬ್ಬರ
ಹತ್ತಿರವೂ ಮೊಬೈಲ್ ಫೋನ್ ಇದ್ದರೆ ಒಬ್ಬರನ್ನೊಬ್ಬರ ಎಸ್.ಎಮ್.ಎಸ್ ಗಳನ್ನು ಚೆಕ್
ಮಾಡುವುದು, ಇದರಿಂದ ಮನಸ್ತಾಪ, ಹೆಂಡತಿ ಜಾತಕದಲ್ಲಿ ಇದು ಅತೀ ಜಾಸ್ತಿ ಇದ್ದರೆ ಅವಳು ತನ್ನ ಗಂಡ
ಯಾವಾಗಲೂ ತನ್ನ ಮುಂದೆಯೇ ಕೂತಿರಬೇಕು, ತನ್ನ ಮಾತನ್ನೇ ಕೇಳಬೇಕು, ಇಂಟರ್ನೆಟ್ ಮುಂದೆ ಕೂರಬಾರದು, ಫೋನ್ ಕೈಯಲ್ಲಿ ಇರಬಾರದು, ಸ್ನೇಹಿತರ ಜೊತೆಯಲ್ಲಿ ತಿರುಗಾಡಲು ಹೋಗಬಾರದು, ತಾನಾಯಿತು ತನ್ನ ಸಂಸಾರ ಆಯಿತು
ಅಂತ ಇರುವವರು ಆಗಿರುತ್ತಾರೆ. ಯಾವಾಗಲೂ ಸಿಡುಕು ಮುಖ, ಇಂಥವರ ಹತ್ತಿರ ಫ್ರೀ ಆಗಿ ಮಾತನಾಡಲು ತುಂಬಾ ಮುಜುಗರ, ಇವರಿಗೆ ವಿಪರೀತ ಅಸಿಡಿಟಿ, ಗಾಸ್ಟ್ರಿಕ್ ತೊಂದರೆ, ಹೊಟ್ಟೆನೋವು, ಮಲಬದ್ಧತೆಯಿಂದ ನರಳುತ್ತಿರುತ್ತಾರೆ. ಸಣ್ಣ, ಸಣ್ಣ ದೇಹದ ತೊಂದರೆಗಳಿಗೂ ವಿಪರೀತ ಔಷಧಿಗಳನ್ನು ನುಂಗುತ್ತಿರುತ್ತಾರೆ, ಹೇಳಿದ ಮಾತು ಕೇಳುವುದಿಲ್ಲ, ಎಲ್ಲದಕ್ಕೂ ಮೊಂಡುವಾದಗಳು, ಶತ್ರುಗಳ ಹತ್ತಿರ ಬೇಕಾದರೂ ಒಡನಾಟ ಮಾಡಬಹುದು. ಆದರೆ ಇಂಥಹವರ ಹತ್ತಿರ ಒಡನಾಟದಿಂದ ಇರುವುದು ತುಂಬಾ ಕಷ್ಟ.
ಆದರೆ ಈ 11-00 ಜಾತಕ ಇರೋರ ಹತ್ತಿರ ಒಡನಾಟ ಮಾಡಬೇಕಿದ್ರೆ ಹತ್ತಾರು ಸಲ ಯೋಚನೆ ಮಾಡಬೇಕಾಗುತ್ತೆ. ಏನು ಹೇಳಿದರೆ ಏನು ತಿಳಿದುಕೊಳ್ಳುತ್ತಾರೋ ಎಂಬ
ತುಂಬಾ ಭಯ ಇರುತ್ತೆ. ಏನೋ ಹೇಳೋಕೆ ಹೋಗಿ
ಇನ್ನೇನೋ ಆದರೆ ತುಂಬಾನೇ ಕಷ್ಟಕ್ಕೆ ಸಿಕ್ಕಿಹಾಕಿಕೊಂಡು ಬಿಡುತ್ತೇವೆ. ಇವರನ್ನು ಯಾವ ಕೆಲಸಕ್ಕೂ ಕರೆಯುವ ಹಾಗಿಲ್ಲ. ಏನೋ ಮೂಡ್
ಚೆನ್ನಾಗಿದ್ದರೆ ನಾವು ಬಚಾವ್. ಅವರುಗಳು ಗುರ್ ಅನ್ನೋಕೆ ಶುರು ಮಾಡಿಬಿಟ್ಟರೆ ಅಷ್ಟೇ, ನಾವೇ ಆ ಸ್ಥಳದಿಂದ ಓಡಿಹೋಗಬೇಕಾಗುತ್ತೆ.
ಇವರುಗಳ ಹತ್ತಿರ ವಾದ ಮಾಡಿ ಗೆಲ್ಲುವುದೇ ಕಷ್ಟಸಾಧ್ಯ.
ನಾವು ಕೋಳಿಗೆ ನಾಲಕ್ಕು ಕಾಲು ಅಂದರೆ ಅವರು ಮೂರೇ ಕಾಲು ಎಂದು ವಾದಿಸುವವರು. ನಾವು ಏತಿ ಎಂದರೆ ಅವರು ಪ್ರೇತಿ
ಎನ್ನುತ್ತಾರೆ, ನಾವು ಪ್ರೇತಿ ಎಂದರೆ ಅವರು ಬ್ರಹ್ಮೇತಿ ಎನ್ನುತ್ತಾರೆ.. ಊರಿನೋರಿಗೆಲ್ಲಾ ಬುದ್ಧಿ ಹೇಳಲು ಬಯಸುತ್ತಾರೆ, ಆದರೆ ತಮಗೆ ಯಾರೂ ಬುದ್ಧಿಯನ್ನು ಹೇಳಬಾರದು ಎನ್ನುತ್ತಾರೆ..
ಒಂದು ಮನೆಯಲ್ಲಿ ಸುಮಾರು ೧೨ ಜನ ಇದ್ದು ಇವರೆಲ್ಲರಿಗೂ ೧೧-೦೦ ಡಿಗ್ರೀಗಳಿದ್ದು ಬಿಟ್ಟರೆ ದೇವರೇ ಗತಿ.
ಒಬ್ಬರ ಮೇಲೆ ಒಬ್ಬರಿಗೆ ಅನುಮಾನ, ಆ ಮನೆ ನರಕದ ಸಮಾನ ಇರುತ್ತೆ.
ಒಂದು ಸೆಕೆಂಡುಗಳೂ ನೆಮ್ಮದಿ ಇರುವುದಿಲ್ಲ. ಇಷ್ಟೆಲ್ಲಾ ಅವಗುಣಗಳು ಇದ್ದರೂ ಇವರು ಮಹಾ
ಬುದ್ಧಿವಂತರು. ಕಥೆ, ಕವನ, ಚಿತ್ರ ಬಿಡಿಸುವುದು, ಪೈಂಟಿಂಗ್, ಸಂಗೀತ ಇತ್ಯಾದಿ ಕಲೆಗಳನ್ನು ಹೊಂದಿರುತ್ತಾರೆ. ಈ ಡಿಗ್ರೀಗಳು ಇರುವವರು ಕಲೆಗಳಲ್ಲಿ ತುಂಬಾನೇ
ಆಸಕ್ತಿ ಹೊಂದಿರುತ್ತಾರೆ. ಈ ಡಿಗ್ರೀಗಳ ಜೊತೆಗೆ ೨೮ ಡಿಗ್ರೀ-೫೦ನಿಮಿಷ ಇದ್ದುಬಿಟ್ರೆ ಹಾಗೂ ಹೀಗೂ
ಜೊತೆಯಲ್ಲಿ ಇರಬಹುದು.
ಈ ಡಿಗ್ರೀಗಳು ಯಾವುದೇ ಥರಹ ಕೆಲಸ ಮಾಡುವವರಿಗೂ
ಅನ್ವಯವಾಗುತ್ತದೆ. ಅದರಲ್ಲೂ ಸಾಫ್ಟ್ ವೇರ್ ಇಂಜಿನೀಯರ್ ಗಳಿಗಂತೂ ಇದು ಜೊತೆಯಲ್ಲೇ ಇರುತ್ತದೆ.
ಇನ್ನೂ ಒಂದು ಮುಖ್ಯವಾದ ಅಂಶ ಎಂದರೆ ಹುಡುಗಿ ಆಗಲೀ, ಹುಡುಗಾ ಆಗಲೀ, ಅವರು ಹುಟ್ಟುವಾಗ ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಮೀನ ರಾಶಿಯಲ್ಲಿ ಯಾವುದಾದರೂ ಗ್ರಹಗಳ ಕಾಂಬಿನೇಶನ್ ಈ ಡಿಗ್ರೀಗಳಲ್ಲಿ ಇರಬೇಕು. 28ಡಿಗ್ರೀ-50ನಿಮಿಷ ದಿಂದ 28ಡಿಗ್ರೀ-59ನಿಮಿಷದ ಒಳಗೆ ಇರಬೇಕು. ಅದರಲ್ಲೂ
ವೃಶ್ಚಿಕ ರಾಶಿಯಲ್ಲಿ ಈ ಡಿಗ್ರೀಗಳು ಇರಲೇಬೇಕು. ಇದು ಇದ್ದರೆ ಮಾತ್ರ ಮದುವೆ ಆಗುವುದು ಸಾಧ್ಯ. ಇದು ಇದ್ದೂನೂ ಮದುವೆ ಆಗದಿದ್ದರೆ ರಾಹು, ಕುಜ ಗ್ರಹಗಳ ವಿಷಯವನ್ನು
ನೋಡಬೇಕು. ಪ್ರೇಮವಿವಾಹಗಳಿಗೆ ಮುಂಚಿತವಾಗಿ ಗೊತ್ತಾಗುವುದಿಲ್ಲ. ಈ ಮೇಲಿನ ಡಿಗ್ರೀಗಳು ಪ್ರೇಮ ವಿವಾಹಗಳಿಗೆ ಬಹಳ ಪ್ರಾಮುಖ್ಯತೆಯನ್ನು
ಕೊಡುತ್ತವೆ. ಪ್ರೇಮ ವಿವಾಹಕ್ಕಂತೂ ಇದು ಬಹಳವಾಗಿಯೇ ಇರಬೇಕು. .
ದಾಂಪತ್ಯ ಜೀವನದಲ್ಲಿ ಇಬ್ಬರಲ್ಲೂ ಈ ಮೇಲಿನ ಡಿಗ್ರೀಗಳು ಇದ್ದರೆ ಅವರು ತುಂಬಾ ಪ್ರೀತಿಯಿಂದ ಇರುತ್ತಾರೆ. ಲಗ್ನ ಕುಂಡಲಿಯಲ್ಲಿ ಇಬ್ಬರ ಜಾತಕದಲ್ಲೂ 11ಡಿಗ್ರೀ-00 ನಿಮಿಷ ಇಂದ 11ಡಿಗ್ರೀ-29ನಿಮಿಷದ ಒಳಗೆ ಏನಾದರೂ ಇದ್ದ
ಪಕ್ಷದಲ್ಲಿ ಪ್ರತಿದಿನ ಜಗಳ, ಮನಸ್ತಾಪ, ಸಣ್ಣ, ಸಣ್ಣ ವಿಷಯಕ್ಕೂ ಮನಸ್ತಾಪ, ಭಯಂಕರ ಕೋಪ ಇರುತ್ತವೆ. ಈ ಡಿಗ್ರೀಗಳು ಅಂತರಂಗದಲ್ಲಿ ಅಂದರೆ ನಾಡಿ
ಒಳಗೆ ಇದ್ದರೆ ಯಾವಾಗಲೋ ಒಂದು ಸಲ ಬರುತ್ತಿರುತ್ತದೆ, ಹೋಗುತ್ತಿರುತ್ತದೆ.
ದಯವಿಟ್ಟು ನನ್ನ ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಕ್ಷತ್ರ ಗುಣಗಳಿಗೆ ಪ್ರಾಶಸ್ತ್ಯ ಕೊಡಬೇಡಿ, ಗಣಗಳಿಗೂ ಪ್ರಾಶಸ್ತ್ಯ ಕೊಡಬೇಡಿ,
ಗ್ರಹ ಮೈತ್ರಕ್ಕೂ ಪ್ರಾಶಸ್ತ್ಯ ಕೊಡಬೇಡಿ. ಈ ಮೇಲಿನ ಡಿಗ್ರೀ
ಮತ್ತು ನಿಮಿಷಗಳು ಇದ್ದರೆ ಸಾಕು ಗ್ರಹ ಮೈತ್ರ ತಾನೇ ತಾನಾಗಿ ಬರುತ್ತವೆ.
(ಸಧ್ಯದಲ್ಲೇ ಜಾತಕದಲ್ಲಿನ 11-00ಡಿಗ್ರೀ ಇಂದ 11ಡಿಗ್ರೀ-29ನಿಮಿಷದ ಲೇಖನಕ್ಕಾಗಿ ನಿರೀಕ್ಷಿಸಿ)
.
Saturday, 21 June 2008
ಚಂದ್ರ ಅವಸ್ಥೆ---ಗ್ರಹಗಳ ಡಿಗ್ರೀಸ್, ನಿಮಿಷಗಳು ಮತ್ತು ಅದರ ಫಲಗಳು
ಡಿಗ್ರೀಸ್-ನಿಮಿಷ
00-00 to
02-30 = ಸ್ವಸ್ಥಾನದಿಂದ
ಪ್ರವಾಸ
05-00 = ಪೂಜಿಸಲ್ಪಟ್ಟ ರಾಜನ
ಸ್ಥಾನದಲ್ಲಿ ಆಸಕ್ತಿ ಇರುವಿಕೆ
07-30 = ಪ್ರಾಣ ಹಾನಿ
10-00 = ರಾಜತ್ವ
12-30 = ತನ್ನ ವಂಶಕ್ಕೆ ಯೋಗ್ಯವಾದ
ಗುಣದಲ್ಲಿ ಆಸಕ್ತನಾದವನು
15-00 = ರೋಗಿಯು
17-30 = ಆಸ್ಥಾನದಲ್ಲಿರುವವನು
20-00 = ಭೀತಿ
22-30 = ಹಸಿವಿನ ಭಾಧೆಯಿಂದ
ಕೂಡಿದವನು
25-00 = ಯುವತಿಯ ಮದುವೆ
ಗೃಹಸ್ಥಧರ್ಮಯುಕ್ತನು
27-30 = ರಮ್ಯವಾದ
ಹಾಸಿಗೆಯಲ್ಲಿ ಆಸಕ್ತಿಯುಳ್ಳವನು
30-00 = ಮೃಷ್ಠಭೋಜನಗೊಳ್ಳುವವನು
ಮುಂದುವರೆದ ಭಾಗ-ಚಂದ್ರ ಕ್ರಿಯೆಗಳ ಫಲಗಳು
ಡಿಗ್ರೀಸ್-ನಿಮಿಷ
12-00 = ವ್ಯಾಖ್ಯಾನಾಸಕ್ತನು
= Expert
Expounder
12-30 = ಶತ್ರು ಸಂಹಾರಕನು = Destroyer of Foes
13-00 = ರೋಗಿಯು = Sickly Man
13-30 = ಶತ್ರುಗಳಿಂದ
ಜಯಿಸಲ್ಪಟ್ಟವನು = Vanquished by
enemy
14-00 = ಸ್ವದೇಶ ಬಿಟ್ಟವನು =
Exiled from
home
14-30 = ಸೇವಕನು = Servant
15-00 = ಸಂಪತ್ತು
ನಷ್ಟಗೊಳ್ಳುವವನು = Lost wealth
15-30 = ರಾಜಸಭೆಯವನು = Moving in courtly circles
16-00 = ಉತ್ತಮ ಮಂತ್ರಿಗಳಿಂದ
ಕೂಡಿದವನು = Good counsellor
16-30 = ಅನ್ಯರ ರಾಜ್ಯವನ್ನು
ಹರಿಸಿ ಆಳುವವನು = Incharge of
others lands
17-00 = ಹೆಂಡತಿಯಿಂದ
ಕೂಡಿದವನು = Faithful to
one's wife
17-30 = ಆನೆಯಿಂದ ಹೆದರಿದವನು
= Afraid of
Elephants
18-00 = ಯುದ್ಧ
ಭೀತಿಯುಳ್ಳವನು = Timid in war
18-30 = ತುಂಬಾ ಭಯದಿಂದ
ಕೂಡಿದವನು = Generally
cowardly
19-00 = ಅಡಗಿರುವವನು = Crushed down & hiding
19-30 = ಅನ್ನದಾನ ಮಾಡುವವನು
= charitable by
feeding others
20-00 = ಬೆಂಕಿಯಲ್ಲಿ
ಚಲಿಸುವವನು = One fallen in
fire
20-30 = ಹಸಿವಿನ ಪೀಡೆಯಿಂದ
ಕೂಡಿದವನು = One afflicted
by hunger
21-00 = ಅನ್ನ
ಉಣ್ಣುತ್ತಿರುವವನು = one eating food
21-30 = ಸಂಚರಿಸುತ್ತಿರುವವನು
= A wanderer
22-00 = ಮಾಂಸ ಭೋಕ್ತುವು = Meat eater
22-30 = ಬಾಣದಿಂದ
ಗಾಯಗೊಂಡವನು = Injured by
weapon
23-00 = ವಿವಾಹದಿಂದ
ಕೂಡಿದವನು = one married
23-30 = ಧರಿಸಿದ ಕಂದುಕ
ಚೆಂಡುಳ್ಳವನಾಗಿರುವವನು = with a ball in
a hand
24-00 = ಜೂಜಾಟಗಳಿಂದ
ಕೂಡಿದವನು = Roaming for
gambling & races
24-30 = ರಾಜನು = A king
25-00 = ದುಃಖಿತನ = one that is distressed
25-30 = ಹಾಸಿಗೆಯಲ್ಲಿರುವವನು
= Ever in his bed
26-00 = ಶತ್ರುಗಳಿಂದ
ಸೇವೆಗೊಂಡವನು = served by
enemies
26-30 = ಗೆಳೆಯರಿಂದ
ಕೂಡಿದವನು = surrounded by
friends
27-00 = ಧ್ಯಾನದಿಂದ
ಕೂಡಿದವನು = A yogi
27-30 = ಹೆಂಡತಿಯಿಂದ ಕೂಡಿದ
ಗೃಹಸ್ಥ ಧರ್ಮದವನು = One with his
wife
28-00 = ಮೃಷ್ಟಾನ್ನ ಉಳ್ಳವನು
= one having
sumptuous food
28-30 = ಹಾಲನ್ನು
ಕುಡಿಯುವುವವನು = one drinking
milk
29-00 = ಅತಿಠಿ ಪೂಜ, ಪುಣ್ಯಕಾರ್ಯಗಳನ್ನು ಮಾಡುವವನು = Doing virtual acts
29-30 = ಆರೋಗ್ಯವಂತನು = confident & self possessed
30-00 = ಸುಖವಾಗಿ ಇರುವವನು =
Ever happy
Monday, 16 June 2008
ಮುಂದುವರೆದ ಭಾಗ-Chandra Kriye-ಚಂದ್ರ ಕ್ರಿಯೆಗಳ ಫಲಗಳು
ಡಿಗ್ರೀಸ್ - ನಿಮಿಷ
03-00 = ಸಿಂಹಾಸನಾಧಿಪತಿಯು =
seated on the
throne
03-30 = ರಾಜಶ್ರೇಷ್ಠ = Ruler of Men
04-00 = ಶತ್ರುಗಳನ್ನು
ನಾಶಗೊಳಿಸುವವನು = Destroyer of
Enemies
04-30 = ಸೇನಾಪತಿ = One administering punishment
05-00 = ಗುಣಶೀಲನು = Virtuous Person
05-30 = ಜೀವವಿಲ್ಲದವನು = One quite exhausted
06-00 = ಗಾಯಗೊಂಡ
ತಲೆಯುಳ್ಳವನು = Executed
06-30 = ಗಾಯಗೊಂಡ ಕೈ, ಕಾಲುಗಳುಳ್ಳವನು = Hands & Legs amputated
07-00 = ಸೆರೆಯಲ್ಲಿ ಇರುವವನು
= One fettered
prisoner
07-30 = ನಷ್ಟದಿಂದ ಕೂಡಿದವನು
= One that is
lost or spoiled
08-00 = ರಾಜನು = A King
08-30 = ವೇದಗಳನ್ನು
ಕಲಿಯುವವನು = A Vedic Scholar
09-00 = ನಿದ್ದೆಗೊಳ್ಳುತ್ತಾನೆ
= Sleeping
Protractedly
09-30 = ಸುಚರಿತ ನಿರೂಪಕನು, ಉತ್ತಮ ಚರಿತೆಯನ್ನು ನೆನೆಯುತ್ತಿರುವವನು = ುOne with good conduct
10-00 = ಧರ್ಮಕರ್ತೃ = One practicing dharma
10-30 = ಉತ್ತಮ ವಂಶದವನು = Born of a good family
11-00 = ನಿಧಿಯನ್ನು
ಹೊಂದಿದವನು, ಕೋಪಿಷ್ಠ, ಅನುಮಾನ ಪಡುವವನು, ಒಂಟಿಯಾಗಿ ಇರುವವನು = one aquired treasure, anger, doubtful nature, moody etc
11-30 = ತಕ್ಕಡಿಯನ್ನು
ಹಿಡಿದವನು, ದುರಹಂಕಾರಿ ಮತ್ತು ಇತರೆ = Belonging to a reknowned family
Sunday, 15 June 2008
ಡಿಗ್ರೀಸ್ - ನಿಮಿಷ
೦೦-೦೦ =
00-30 = ಸ್ಠಾನಭ್ರಷ್ಠನು = one fallen from his position
01-00 = ತಪಸ್ವಿಯು = one practicing austerities
01-30 = ಪರಯುವತಿರತನು = one interested in other's women
02-00 = ಕಳ್ಳನು = Gambler
02-30 = ಶ್ರೇಷ್ಠವಾದ ಆನೆಯ
ಮೇಲೇರುವವನು = Mounted on an
elephant