Sunday, August 4, 2013

ಜ್ಯೋತಿಷ್ಯದ ವಿಷಯಗಳು





ಈ ಬ್ಲಾಗಿನಲ್ಲಿ ಸಧ್ಯದಲ್ಲೇ ಜ್ಯೋತಿಷ್ಯದ ವಿಷಯಗಳನ್ನು ಬರೆಯಲಿದ್ದೇನೆ. ಇದರಲ್ಲಿ ಜ್ಯೋತಿಷ್ಯದ ವಿಷಯದಲ್ಲಿ ಹೊಸ ಬೆಳಕು ಎಂಬ ವಿಷಯ ಇರುತ್ತದೆ.

Saturday, 16 June 2007
ಜ್ಯೋತಿಷ್ಯದಲ್ಲಿ ಬರೋ ವಿಷಯಗಳು ಏನು? ಜ್ಯೋತಿಷ್ಯವನ್ನು ಅಷ್ಟು ಸುಲಭವಾಗಿ ಕಲಿಯಲು ಸಾಧ್ಯವಿಲ್ಲ. ಏಕೆಂದರೆ ಇದರಲ್ಲಿ ತಿಳಿಯುವುದು ಬೇಕಾದಷ್ಟಿದೆ. ಕೆಲವರು ಪಂಚಾಂಗದ ಪ್ರಕಾರ ಮಾಡುತ್ತಾರೆ. ಒಂದು ನಿಮಿಷಕ್ಕೆ ಸರಾಸರಿ ೩೦೦ ಮಕ್ಕಳು ಜನ್ಮ ತಾಳುತ್ತಾರೆ. ಇದು ಇನ್ನೂ ಜಾಸ್ತಿಯೂ ಆಗಬಹುದು, ಕಡಿಮೆಯೂ ಆಗಬಹುದು. ಇನ್ನು ಜಾತಕ ತಯಾರಿಸಲು ಭಾರತದ ಎಫಿಮರೀಸ್ ಎಂಬುದನ್ನು ಆಧರಿಸಿ ಮಾಡುತ್ತಾರೆ. ಅಂದರೆ ಇದು ಡಿಗ್ರೀಸ್ ಮತ್ತು ನಿಮಿಷಗಳಲ್ಲಿ ಇರುತ್ತದೆ. ಅಂದರೆ ಎಲ್ಲಾ ಗ್ರಹಗಳು ಯಾವ ಡಿಗ್ರೀ ಮತ್ತು ನಿಮಿಷಗಳಲ್ಲಿ ಕೂತಿರ್ತಾರೋ ಅದಕ್ಕೆ ತಕ್ಕ ಫಲಗಳನ್ನು ಕೊಡುತ್ತಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ೧೨ ಮನೆಗಳಿರುವ ಒಂದು ಚಕ್ರ ಇರುತ್ತದೆ. ಸಾಧಾರಣವಾಗಿ ಈ ಜಾತಕಗಳಲ್ಲಿ ೧೨ ಮನೆಗಳೇ ಬಹಳ ಮುಖ್ಯವಾದುದು. ಈ ೧೨ ಮನೆಗಳಲ್ಲಿ ಮೇಷ, ವೃಷಭ, ಮಿಥುನ,
ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ ಮತ್ತು ಮೀನ ಎಂದು ಇರುತ್ತದೆ. ಈ ಮನೆಗಳಲ್ಲಿ ಯಾವ ಮನುಷ್ಯನು ಯಾವ ಕಾಲಕ್ಕೆ ಹುಟ್ಟುತ್ತಾನೋ ಅದಕ್ಕೆ ತಕ್ಕಂತೆ ಆ ಗ್ರಹಗಳು ಆ ಮನೆಗಳಲ್ಲಿ ಕುಳಿತುಕೊಳ್ಳುತ್ತಾರೆ. ಆ ಗ್ರಹಗಳು ಯಾವುವೆಂದರೆ ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು.
ಜಾತಕಗಳನ್ನು ಮಾಡಬೇಕಾದರೆ ಯಾವಾಗಲೂ ಡಿಗ್ರೀಸ್ ಮತ್ತು ನಿಮಿಷಗಳಲ್ಲೇ ಲೆಕ್ಕಿಸಬೇಕು. ಪ್ರತಿಯೊಂದು ಡಿಗ್ರೀ ಮತ್ತು ನಿಮಿಷಗಳಿಗೂ ಫಲಗಳು ಇರುತ್ತವೆ. ಮತ್ತೆ ಲಗ್ನವನ್ನು ಕಂಡುಹಿಡಿಯಬೇಕಾದರೆ ಸರಿಯಾದ ಹುಟ್ಟಿದ ವೇಳೆ, ಹುಟ್ಟಿದ ತಾರೀಕು,
ಹುಟ್ಟಿದ ಊರು ಬಹಳ ಮುಖ್ಯವಾದದ್ದು. ಹುಟ್ಟಿದ ಊರು ಯಾಕೆ ಬೇಕೆಂದರೆ ಪ್ರತಿಯೊಂದು ಊರಿಗೂ ಅಕ್ಷಾಂಶ ಮತ್ತು ರೇಖಾಂಶ ಬೇಕೇ ಬೇಕು. ಪ್ರತಿಯೊಂದು ಮನೆಗಳು ೦೦ಡಿಗ್ರೀ-೦೦ನಿಮಿಷದಿಂದ ೩೦ಡಿಗ್ರೀ-೦೦ನಿಮಿಷದವರೆಗೂ ಇರುತ್ತದೆ.
ಪ್ರತಿಯೊಂದೂ ಮನೆಗಳಲ್ಲೂ ೧೮೦೦ ಫಲಗಳು ಬರುತ್ತವೆ.

Friday, 15 June 2007
ಜ್ಯೋತಿಷ್ಯ ಎಂದರೇನು? ಎಂದು ಎಲ್ಲರೂ ಕೇಳುತ್ತಾರೆ. ಕೆಲವರಿಗೆ ಇದರ ವಿಷಯ ಗೊತ್ತಿರುತ್ತದೆ. ಕೆಲವರಿಗೆ ಇದು ಗೊಡ್ಡು ಎಂದು ಅನ್ನಿಸುತ್ತದೆ. ನಾನೇ ನನ್ನ ಎಷ್ಟೋ ವಯಸ್ಸಿನವರೆಗೆ ಇದರಲ್ಲಿ ನಂಬಿಕೆ ಇರಲಿಲ್ಲ. ಯಾವಾಗ ತಲೆಗೆ ಏಟು ಬೀಳಲೂ ಪ್ರಾರಂಭವಾಯಿತೋ, ಆಗಿನಿಂದ ಇದರಲ್ಲಿ ನಂಬಿಕೆ ಶುರುವಾಯಿತು. ಇದರಲ್ಲಿ ಏನೋ ಇದೆ ಎಂಬ ನಂಬಿಕೆ. ಈ ೯ ಗ್ರಹಗಳು ಹೇಗೆ ಕೆಲಸ ಮಾಡುತ್ತವೆ ಮನುಷ್ಯನ ಮೇಲೆ ಎಂಬ ವಿಷಯ ನನ್ನ ತಲೆ ಹೊಕ್ಕಿತು. ನಮ್ಮ ಜೀವಮಾನದಲ್ಲಿ ಎಷ್ಟೊಂದು ಬದಲಾವಣೆಗಳು ಬರುತ್ತವೆ. ಇದೆಲ್ಲಾ ಹೇಗೆ ಬರುತ್ತವೆ? ಎಲ್ಲೆಲ್ಲೋ ಇರುವವರು ಇದ್ದಕ್ಕಿದ್ದಂತೆ ಸ್ನೇಹಿತರಾಗುತ್ತಾರೆ. ಚಿಕ್ಕಂದಿನಲ್ಲಿ ಜೊತೆಯಲ್ಲಿ ಓದಿದವರು ಇದ್ದಕ್ಕಿದ್ದಂತೆ ಎಲ್ಲೋ ಮಾಯವಾಗಿಬಿಡುತ್ತಾರೆ. ನಾವೂ ಸಹಾ ಎಲ್ಲೇಲ್ಲೋ ಹೋಗಿಬಿಡುತ್ಟೇವೆ. ಎಲ್ಲೋ ಬೆಳೀತೀವಿ, ಎಲ್ಲೋ ಓದೋಕೆ ಹೋಗ್ತೀವಿ, ಎಲ್ಲೋ ಮದುವೆ ಆಗ್ತೀವಿ, ಎಲ್ಲಿಂದಲೋ ಬರ್ತಾಳೆ ಆ ಹೆಂಡತಿ ಆಗೋಳು. ಇದೆಲ್ಲಾ ಏನು ವಿಚಿತ್ರಾ???????????????????? ಯಾವುದೋ ಕೆಲಸಕ್ಕೆ ಸೇರುತ್ತೀವಿ. ಅಲ್ಲೇ ಇರ್ತೀವೋ ಅಥವಾ ಅದನ್ನು ಬಿಟ್ಟು ಬೇರೆ ಕಡೆ ಹೋಗ್ತೀವೋ, ಅಥವಾ ಅದನ್ನು ಮನೇಲೇ ಕೂತುಕೊಳ್ತೀವೋ ಗೊತ್ತಿಲ್ಲ. ಏನೇನೋ ಚಿತ್ರ ವಿಚಿತ್ರವಾಗಿ ನಡೆಯುತ್ತಿರುತ್ತದೆ. ಖಾಯಿಲೆಗಳು ಬೀಳ್ತೀವಿ, ಯಾವ ಯಾವುದೋ ಡಾಕ್ಟರ್ ಹತ್ರ ಓಡುತ್ತೀವಿ, ಅಲ್ಲಿ ವಾಸಿಯಾಗದೇ ಇದ್ರೆ ಇನ್ನೊಬ್ರು ಡಾಕ್ಟರರನ್ನು ಹುಡುಕಿಕೊಂಡು ಹೋಗ್ತೀವಿ. ಜೊತೆಯಲ್ಲಿ ಬೆಳೆದವರು ಕೆಲವರು ಪರದೇಶಕ್ಕೆ ಹೋಗ್ತಾರೆ, ಕೆಲವರು ಸಣ್ಣ ಕೆಲಸಕ್ಕೆ ಹೋಗ್ತಾರೆ, ಕೆಲವರು ಇನ್ಯಾವುದೋ ಕೆಲಸಕ್ಕೆ ಹೋಗ್ತಾರೆ. ಕೆಲವರಿಗೆ ಜೀವನವೆಲ್ಲಾ ತುಂಬಾ ಕಷ್ಟ, ಊಟಕ್ಕೂ ಕಷ್ಟ ಪಡುತ್ತಿರುತ್ತಾರೆ. ಇನ್ನೂ ಕೆಲವರ ಹತ್ತಿರ ಬೇಕಾದಷ್ಟು ದುಡ್ದು ಕೊಳೆತುಹೋಗೋ ಅಷ್ಟು ಇರುತ್ತದೆ. ಇನ್ನೂ ಏನೇನೋ ವಿಚಿತ್ರಗಳು ನಡೀತಾ ಇರುತ್ತವೆ.
ಇದೆಲ್ಲಾ ಬದಲಾವಣೆಗಳು ಹೇಗೆ ಬರುತ್ತವೆ? ಇದರ ವಿಷಯವಾಗಿ ತುಂಬಾ, ತುಂಬಾ ಯೋಚನೆ ಮಾಡಿ ಈ ಗ್ರಹಗಳಿಗೂ ನಮಗೂ ಏನೋ ಸಂಬಂಧ ಇದೆ ಎಂದು ಗೊತ್ತಾಯಿತು. ನಂತರ ನಾನೂ ಕಷ್ಟಪಟ್ಟು ಜ್ಯೋತಿಷ್ಯವನ್ನು ಕಲಿಯಲು ಪ್ರಾರಂಭಿಸಿದೆ.
ನಂತರ ಗೊತ್ತಾಯಿತು ಇದರಲ್ಲಿಯೇ ಎಲ್ಲಾ ಇರುವುದು ಎಂದು.
ನಾನು ಹೊಸಾ ರೀತಿಯಲ್ಲಿ ಕಲಿಯಬೇಕೆಂದು ನಿರ್ಧರಿಸಿ ಕಲಿಯಲು ಪ್ರಾರಂಭಿಸಿದೆ. ಇದು ಏನು ಎಂಬುದನ್ನು ಮುಂದೆ ತಿಳಿಸುತ್ತೇನೆ.
 
 

No comments:

Post a Comment